ಅಬ್ಬಾ..! ಪ್ರಭಾಸ್ ಜೊತೆ ನಟಿಸಲು ದೀಪಿಕಾ ಇಷ್ಟೊಂದು ಸಂಭಾವನೆ ಕೇಳಿದ್ರಾ? | Deepika Padukone Big Amount Demand For Prabhas Next

ಅಬ್ಬಾ..! ಪ್ರಭಾಸ್ ಜೊತೆ ನಟಿಸಲು ದೀಪಿಕಾ ಇಷ್ಟೊಂದು ಸಂಭಾವನೆ ಕೇಳಿದ್ರಾ? | Deepika Padukone Big Amount Demand For Prabhas Next

[ad_1]

'ಮಹಾನಟಿ' ನಿರ್ದೇಶಕರ ಜೊತೆ ಪ್ರಭಾಸ್ ಸಿನಿಮಾ

‘ಮಹಾನಟಿ’ ನಿರ್ದೇಶಕರ ಜೊತೆ ಪ್ರಭಾಸ್ ಸಿನಿಮಾ

ಪ್ರಭಾಸ್ 20ನೇ ಸಿನಿಮಾದ ಚಿತ್ರೀಕರಣ ಮುಗಿಯುತ್ತಿದ್ದಂತೆ ‘ಮಹಾನಟಿ’ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಜೊತೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಈಗಾಗಲೆ ನಾಗ್ ಮತ್ತು ಪ್ರಭಾಸ್ ಸಿನಿಮಾ ಮಾಡುವ ಬಗ್ಗೆ ಅಧಿಕೃತ ಮಾಹಿತಿ ಬಹಿರಂಗವಾಗಿದೆ. ಸಿನಿಮಾಗೆ ಟಾಲಿವುಡ್ ನ ಪ್ರಸಿದ್ಧ ವೈಜಯಂತಿ ಬ್ಯಾನರ್ ಬಂಡವಾಳ ಹೂಡುತ್ತಿದೆ.

ಪ್ರಭಾಸ್ ಡೈ ಹಾರ್ಡ್ ಫ್ಯಾನ್ಸ್ ಗ್ರೂಪ್ ಸೇರಿದ ಬಾಲಿವುಡ್ ಖ್ಯಾತ ನಟಿ

ಪ್ರಭಾಸ್ ಗೆ ನಾಯಕಿಯಾಗ್ತಾರಾ ದೀಪಿಕಾ?

ಪ್ರಭಾಸ್ ಗೆ ನಾಯಕಿಯಾಗ್ತಾರಾ ದೀಪಿಕಾ?

ಪ್ರಭಾಸ್ 21ನೇ ಸಿನಿಮಾಗೆ ನಾಯಕಿಯಾರಾಗ್ತಾರೆ ಎನ್ನುವ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಬಾಲಿವುಡ್ ನ ಖ್ಯಾತ ನಾಯಕಿಯನ್ನು ಕರೆತರಬೇಕಂದು ಸಿನಿಮಾತಂಡ ಹಠಕ್ಕೆ ಬಿದ್ದಿದೆ. ಹಾಗಾಗಿ ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಅವರ ಜೊತೆ ಚಿತ್ರತಂಡ ಈಗಾಗಲೆ ಮಾತುಕತೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ಭಾರಿ ಮೊತ್ತದ ಸಂಭಾವನೆ ಕೇಳಿದ ದೀಪಿಕಾ

ಭಾರಿ ಮೊತ್ತದ ಸಂಭಾವನೆ ಕೇಳಿದ ದೀಪಿಕಾ

ಪ್ರಭಾಸ್ ಜೊತೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಆದರೆ ಪ್ರಭಾಸ್ ಜೊತೆ ನಟಿಸಲು ದೀಪಿಕಾ ಬೇಡಿಕೆ ಇಟ್ಟ ಸಂಭಾವನೆ ಕೇಳಿ ಚಿತ್ರತಂಡ ಶಾಕ್ ಆಗಿದೆಯಂತೆ. ಹೌದು, ದೀಪಿಕಾ, ಪ್ರಭಾಸ್ ಜೊತೆ ನಟಿಸಲು ಬರೋಬ್ಬರಿ 20 ರಿಂದ 25 ಕೋಟಿ ಸಂಭಾವನೆ ಕೇಳಿದ್ದಾರಂತೆ.

TRPಯಲ್ಲಿ ‘ಬಾಹುಬಲಿ’ಯನ್ನು ಹಿಂದಿಕ್ಕಿದ ಮಹೇಶ್ ಬಾಬು ‘ಸರಿಲೇರು ನೀಕೆವ್ವರು’

ದೀಪಿಕಾ ಪಡೆಯುವ ಸಂಭಾವನೆ ಎಷ್ಟು?

ದೀಪಿಕಾ ಪಡೆಯುವ ಸಂಭಾವನೆ ಎಷ್ಟು?

ದೀಪಿಕಾ ಬಾಲಿವುಡ್ ಬಹುಬೇಡಿಕೆಯ ನಟಿ. ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ದೀಪಿಕಾ ಕೂಡ ಒಬ್ಬರು. ಕಂಗನಾ ರಣಾವತ್ ನಂತರ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ದೀಪಿಕಾ ಎಂದು ಹೇಳುತ್ತಾರೆ. ಬಾಲಿವುಡ್ ಮೂಲಗಳ ಪ್ರಕಾರ ದೀಪಿಕಾ 14 ರಿಂದ 15 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ. ಆದರೆ ಟಾಲಿವುಡ್ ಸಿನಿಮಾಗೆ ಬರೋಬ್ಬರಿ 20 ರಿಂದ 25 ಕೋಟಿ ಬೇಡಿಕೆ ಇಟ್ಟಿದ್ದಾರೆ. ನಿಜಕ್ಕೂ ದೀಪಿಕಾ ಇಷ್ಟೊಂದು ಸಂಭಾವನೆ ಬೇಡಿಕೆ ಇಟ್ಟಿದ್ದಾರಾ? ಪ್ರಭಾಸ್ ಜೊತೆ ನಟಿಸುತ್ತಾರಾ? ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ.

[ad_2]

Source link

Spread the love with one click below
 •  
 •  
 •  
 •  
 •  
 •  
 •  
 •  
 •  
 •  
 •  
 •  
 •  
 •  
 •  

Leave a Reply

Close Menu